Ep. 12: ನೂರು ಶೃಂಗಾರ ಹೃದ್ಯ ಪದ್ಯಗಳು. Amaru-Shataka in Kannada.

ThaleHarateEpisode12.jpg

ಸಾವಿರ ವರ್ಷಗಳ ಹಿಂದೆ, ಪ್ರೇಮ ಪದ್ಯಗಳು ಹೇಗಿದ್ದವು? ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 12ನೆ ಎಪಿಸೋಡಿನಲ್ಲಿ ರಾಮಪ್ರಸಾದ್ ಕೆ. ವಿ. ಅವರು ಅಮರುಶತಕ ಎಂಬ ಪದ್ಯಗಳ ಸಂಗ್ರಹಣೆಯ ಬಗ್ಗೆ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬೀ. ಎಸ್. ಅವರ ಜೊತೆ ಚರ್ಚಿಸುತ್ತಾರೆ ಅಮರುಶತಕ, ರಾಮಪ್ರಸಾದ್ ಅವರು ಈ ಅದ್ಭುತ ಪದ್ಯಗಳ ಕನ್ನಡ ಅನುವಾದವನ್ನು ರಚಿಸಿದ್ದರೆ. ಈ ಎಪಿಸೋಡಿನಲ್ಲಿ, ಅಮರುಕನ ಪದ್ಯಗಳ ಒಂದು ರುಚಿ ಸಿಗತ್ತೆ. ಈ ಪದ್ಯಗಳು ರಚಿಸಿದ ಸಮಯ, ಆಗಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಆ ಕಾಲದ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಆಳವಾಗಿ ಚರ್ಚೆ ಮಾಡುತ್ತೇವೆ.

ರಾಮಪ್ರಸಾದ್ ರವರು ಅಮೆರಿಕಾದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತ ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾಟಕಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ನಾಟಕಗಳನ್ನು ರಚಿಸಿದ್ದು, ಕನ್ನಡಕ್ಕೆ ಇಂಗ್ಲೀಷ್ ಮತ್ತು ಸಂಸ್ಕೃತದಿಂದ ಅನುವಾದ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ 'ಹಂಸಾನಂದಿ' ಎಂದು ಪರಿಚಿತರು.

What did romantic poetry in India sound like, over a thousand years ago? Ramaprasad KV has an in-depth conversation on the Amaru-Shataka with hosts Pavan Srinath and Surya Prakash BS on Episode 12 of the Thale-Harate Kannada Podcast. The Amaru-Shataka is a celebrated collection of 100 verses written in Sanskrit around 6th-8th century CE by the poet Amaruka.

Ramaprasad has translated the Amaru-Shataka from Sanskrit into accessible Kannada, and talks about the immortal nature of this work, the timeless appeal of how the poet has approached the conversations and thoughts of those in love. The podcast features a wide-ranging discussion on the social and economic conditions that may have enabled such poetry, its history, rhyme and metre, as well as about ancient Indian literature.

Ramaprasad KV is a technology professional based in California. He writes and blogs often in Kannada, is a playwright, director, musician and translates poetry and prose into Kannada. He is well-known on twitter as @Hamsanandi(https://twitter.com/hamsanandi).

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloud or any other podcast app. We are there everywhere. ಬನ್ನಿ ಕೇಳಿ!

Ep. 08: ಆಧಾರ್ ಬೆಳೆದು ಬಂದ ದಾರಿ.The Evolution of Aadhaar.

ThaleHarateEpisode08.jpg

ಆಧಾರ್ ಪ್ರಾಜೆಕ್ಟ್ ಮತ್ತು ಯು.ಐ.ಡಿ.ಐ.ಎ ಹೇಗೆ ಮೂಡಿ ಬಂತು? ಈ ಸೃಷ್ಣೆಯ ಜೊತೆಗೆ ನಿರ್ಮಾಣವಾಗುವಂತಹ ನ್ಯಾಯ ನೀತಿಗಳೇನು? ಸುಪ್ರೀಂ ಕೋರ್ಟ್, ನಾಗರಿಕರ ಪ್ರೈವಸಿ, ಒಂದು ಮೂಲಭೂತ ಹಕ್ಕು ಎಂಬ ತೀರ್ಪಿಗೆ ಹೇಗೆ ಬಂತು?

ತಲೆ ಹರಟೆ ಕನ್ನಡ ಪೋಡ್ಕಾಸ್ಟಿನ 8ನೆ ಎಪಿಸೋಡ್ಗೆ, ಅಲೋಕ್ ಪ್ರಸನ್ನ ಕುಮಾರ್ ಅವರು, ಮತೊಮ್ಮೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಮಾತನಾಡಲು ಬಂದಿದ್ದಾರೆ. ನಮ್ಮ ೪ನೆ ಎಪಿಸೋಡಲ್ಲಿ , ೨೦೧೮ ವರ್ಷದಲ್ಲಿ ಆದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ವಿವರವಾಗಿ ತಿಳಿಸಿದರು. ಈ ಎಪಿಸೋಡಲ್ಲಿ, ಇವರು ಡೇಟಾ ಪ್ರೊಟೆಕ್ಷನ್, ಮತ್ತು ಸಾರ್ವಜನಿಕರ ಖಾಸಗಿತನದ (ಪ್ರೈವಸಿ) ಬಗ್ಗೆ ವಿವರಿಸುತ್ತಾರೆ.

ಅಲೋಕ್ ಅವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. ಈಗ ಇವರು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಇನ ಬ್ಯಾಂಗಲೋರ್ ಆಫೀಸ್ನಲ್ಲಿ ಮುಖ್ಯಸ್ಥರಾಗಿದ್ದಾರೆ. ಇವರು ಗಣತಂತ್ರ ಪೋಡ್ಕಾಸ್ಟ್ ಎಂಬ ಇವರದೇ ಸ್ವಂತ ಶೋವನ್ನು ನಡೆಸುತ್ತಾರೆ. ಬನ್ನಿ ಕೇಳಿ.

How did Aadhaar the project, and the laws around Aadhaar and UIDAI evolve? How did court cases on Aadhaar evolve into a landmark judgment by the Supreme Court firmly declaring that all Indians have a Fundamental Right to Privacy? What can happen next, with data protection and privacy concerns coming to the fore?

Alok Prasanna Kumar returns to the Thale-Harate Kannada Podcast in Episode 8, and talks to Surya Prakash BS and Pavan Srinath about the evolution of Aadhaar and the laws around it. Alok was previously a guest on Episode 4 to explain the 2018 set of judgments on Aadhaar. Alok is a former Supreme Court lawyer, and currently a Senior Fellow at the Vidhi Centre for Legal Policy. He has also just started the Ganatantra Podcast on the IVM Podcast Network with Sarayu Natarajan in English. Do check it out.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTube or any other podcast app. We are there everywhere. ಬನ್ನಿ ಕೇಳಿ!

You can listen to this show and other awesome shows on the new and improved IVM Podcast App on Android: https://ivm.today/android
or iOS: https://ivm.today/ios

Ep. 07: ಕನ್ನಡ ಗ್ರಾಹಕರ ಶಕ್ತಿ. Kannada and the Consumer.

ThaleHarateEpisode07.jpg

ನಾಗರೀಕರ ಮೂಲಭೂತಹಕ್ಕುಗಳು ಹಲವರಿಗೆ ತಿಳಿದಿವೆ, ಆದರೆ ಗ್ರಾಹಕರಿಗೆ ಅವರ ಹಕ್ಕುಗಳ ಅರಿವಿದೆಯೇ? ಕರ್ನಾಟಕದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರದ ಸೇವೆಗಳು ಕನ್ನಡಲ್ಲಿ ದೊರೆಯುತ್ತಿಲ್ಲ. ನಮ್ಮ 7ನೇ ಎಪಿಸೋಡ್ನಲ್ಲಿ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು, ವಸಂತ್ ಶೆಟ್ಟಿ ಅವರ ಜೊತೆ ಗ್ರಾಹಕರ ಹಕ್ಕುಗಳ ಬಗ್ಗೆ ಮತ್ತು ಅವರು ಸಂಘಟಿತವಾಗಿ ಕ್ರಿಯಾಶೀಲರಾಗಿದ್ದಲ್ಲಿ ಅವರಲ್ಲಿರುವ ಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಹಾಗೆ, 'ಕನ್ನಡ ಗ್ರಾಹಕರ ಕೂಟ' ಮತ್ತು ಜನಸಾಮಾನ್ಯರಲ್ಲಿ ಈ ವಿಷಯಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಅದು ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸುತ್ತಾರೆ.

ವಸಂತ್ ಶೆಟ್ಟಿ ತಂತ್ರಜ್ಞಾನ ವೃತ್ತಿಪರರು, ಮತ್ತೆ 'ಮುನ್ನೋಟ' ಪುಸ್ತಕಾಲಯವನ್ನು ನಡೆಸುತ್ತಾರೆ. ಇವರು ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸುತ್ತಾರೆ.

We have rights and powers as a citizen, but do we also have powers as a consumer? Can Kannadigas demand that they be provided services in their own language? In Episode Seven of the Thale-Harate Kannada Podcast, Vasant Shetty talks to Surya Prakash BS and Pavan Srinath about the power of Kannada consumers. Vasant also shares the work of Kannada Grahakara Koota, or the Kannada Consumers' Association, in bringing about awareness and

Vasant Shetty is a tech professional, and a co-founder of Munnota Book Store, and is a passionate advocate of federalism, and the interests of Kannada language and speakers.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

Ep. 06: ಎ. ಐ. ಅಂದರೆ ಏನು? Will A.I. Take Our Jobs?

ThaleHarateEpisode06.jpg

ಎ. ಐ. ಅಂದರೆ ಏನು? ಎ. ಐ. ಮತ್ತು ಮಷೀನ್ ಲರ್ನಿಂಗ್ ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಮತ್ತು ಅದು ಭವಿಷ್ಯವನ್ನು ಹೇಗೆ ರೂಪಿಸಬಹುದು? ಎ. ಐ. ವ್ಯಾಪಕವಾಗಿ ಬಳಕೆಯಾಗುವುದರಿಂದ ಐ. ಟಿ. ಮತ್ತು ಇತರ ಉದ್ಯೋಗಗಳ ಗತಿಯೇನು. ನಮ್ಮ ಏಳನೇ ಕಂತಿನಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಎ. ಐ. ಗತಕಾಲ, ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮೈಸೂರಿನ ನಿವಾಸಿಯಾದ ಗಣೇಶ್ ರವರು ಎ. ಐ. ಮತ್ತು ಟ್ರಾನ್ಸ್ ಹ್ಯೂಮನಿಸಮ್ ಬಗ್ಗೆ ಆಗಾಗ್ಗೆ ಬರೆಯುತ್ತಿರುತ್ತಾರೆ. ಈ ಕಂತಿನಲ್ಲಿ ಅವರು ಈ ಕ್ಷೇತ್ರದ ತಜ್ಞರಾಗಿ ಭಾಗವಹಿಸಿದ್ದಾರೆ. ಅವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಪಾದಕರಾಗಿದ್ದು ತಮ್ಮ ಬಿಡುವಿನಲ್ಲಿ ಗಿಟಾರ್, ಬೈಕ್, ವೀಡಿಯೋ ಗೇಮ್ಸ್ ನಲ್ಲಿ ಕಳೆಯುತ್ತಾರೆ. ಟ್ವಿಟ್ಟರ್ನಲ್ಲಿ ಅವರ ಹ್ಯಾಂಡಲ್ @craynonymous

What is Artificial Intelligence? How are AI and Machine Learning influencing our lives today, and what is the potential for the future? What happens to jobs in the IT sector and beyond, with AI technology becoming mainstream? Ganesh Chakravarthi and Pavan Srinath discuss the past, present and future of artificial intelligence in seventh episode of the Thale-Harate Kannada Podcast. Ganesh, who's a guest in this episode, researches and writes frequently on artificial intelligence and transhumanism. Ganesh is Editor at the Takshashila Institution by day, and is a guitarist, biker, gamer and a resident of Mysuru. You can follow him on Twitter at @craynonymous

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

Ep. 05: ಅಮೆರಿಕಾ! ಅಮೆರಿಕಾ!! Kannada in the USA.

ThaleHarateEpisode05.jpg

ದೂರದ ಅಮೆರಿಕಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಯಾವ ಸ್ಥಿತಿಯಲ್ಲಿವೆ? ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು ಹೇಗೆ ಬೆಳೆದುಕೊಂಡು ಬಂದಿದ್ದಾರೆ. ಕೆ ವಿ ರಾಮಪ್ರಸಾದ್  ರವರು ಪವನ್ ಶ್ರೀನಾಥ್ ಮತ್ತು ಬಿ. ಎಸ್. ಸೂರ್ಯ ಪ್ರಕಾಶ್ ರವರೊಂದಿಗೆ ಕಳೆದ ಎರಡು ದಶಕಗಳಲ್ಲಿ ಅವರು ಕಂಡಿರುವ ಬದಲಾವಣೆ ಗಳು ಮತ್ತು ಅವರ ವೈಯಕ್ತಿಕ ಪಯಣದ ಬಗ್ಗೆ ಹಂಚಿಕೊಳ್ಳುತ್ತಾರೆ. ಈ ಸಂಚಿಕೆಯಲ್ಲಿ ಅಮೇರಿಕ ಮತ್ತು ಬೇ ಏರಿಯಾದಲ್ಲಿರುವ ಕನ್ನಡ ಸಂಘಟನೆಗಳು, ಅಲ್ಲಿಗೆ ಭೇಟಿ ನೀಡುವ ಕಲಾವಿದರು, ವಲಸಿಗರಲ್ಲಿಯ ಪೀಳಿಗೆಗಳ ನಡುವಿನ ಅಂತರ, ಬೇರೆ ಭಾಷೆಯ ವಲಸಿಗರ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಭಾರತೀಯರ ಜೊತೆ ಬೆರೆಯುವಿಕೆ ಬಗ್ಗೆ ಮಾತನಾಡುತ್ತಾರೆ. ರಾಮ ಪ್ರಸಾದ್ ರವರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತ ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾಟಕಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ನಾಟಕಗಳನ್ನು ರಚಿಸಿದ್ದು, ಕನ್ನಡಕ್ಕೆ ಇಂಗ್ಲೀಷ್ ಮತ್ತು ಸಂಸ್ಕೃತದಿಂದ ಅನುವಾದ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ 'ಹಂಸಾನಂದಿ' ಎಂದು ಪರಿಚಿತರು.

How is Kannada language and culture faring on the far side of the world? How are Kannadigas doing in the United States of America, and how has the Kannada-speaking diaspora evolved in the last 20 years? Ramaprasad KV joins hosts Surya Prakash BS and Pavan Srinath to share what he has seen over the last two decades, as well as his personal journey. The podcast episode features conversations on Kannada organisations in the US and in the San Francisco Bay Area, artists and musicians visiting the US, first and second generation migrants, and the myriad interconnections between Kannadigas and Indians living in places across the world. Ramaprasad KV is a technology professional by day, and is a Kannadiga through and through. He writes and blogs often in Kannada, is a playwright and director, musician and translates poetry and prose into Kannada. He is well-known on twitter as @Hamsanandi.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

Ep. 04: ಆಧಾರ್ ತೀರ್ಪು: ಏನು? ಏಕೆ? ಹೇಗೆ? Aadhaar Judgments Explained.

ThaleHarateEpisode04.jpg

ಭಾರತದ ಸರ್ವೋಚ್ಛ ನ್ಯಾಯಾಲಯವು 'ಆಧಾರ್' ಯೋಜನೆ ಬಗ್ಗೆ ಮಹತ್ತರವಾದ ತೀರ್ಪುಗಳನ್ನು ಸೆಪ್ಟೆಂಬರ್ 2018ರಲ್ಲಿ ನೀಡಿತು. ಇವು ಸರ್ಕಾರವು 'ಆಧಾರ್' ಮೂಲಕ ಪಡೆದುಕೊಂಡ ಮಾಹಿತಿಯನ್ನು ವಿನಿಯೋಗಿಸುವ ರೀತಿ, ದೇಶದಲ್ಲಿನ ಸರ್ಕಾರಿ ಯೋಜನೆಗಳ ಕಾರ್ಯವೈಖರಿ, ಜನಸಾಮಾನ್ಯರ ಪ್ರೈವಸಿ ಹಕ್ಕು ಮತ್ತು ಖಾಸಗಿವಲಯದ ಮೇಲಿನ ಗಾಢವಾದ ಪರಿಣಾಮ ಬೀರಲಿದೆ. ಅಲೋಕ್ ಪ್ರಸನ್ನ ಕುಮಾರ್ ರವರು ಸೂರ್ಯ ಪ್ರಕಾಶ್ ಬಿ. ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಈ ತೀರ್ಪನ್ನು ಸರಳವಾಗಿಸುತ್ತ ಇದರ ಮುಂದಿನ ರೂಪು-ರೇಷೆಗಳು ಹೇಗಿರಬಹುದು ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಅಲೋಕ್ ರವರು ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದು ಈಗ ವಿಧಿ ಸಂಸ್ಥೆಯ ಬೆಂಗಳೂರಿನ ಕಚೇರಿಯ ಮುಖ್ಯಸ್ಥರಾಗಿದ್ದಾರೆ.

The Supreme Court of India gave an important set of judgments related to Aadhaar in September 2018. These judgments will have deep implications for the government's use of Aadhaar, the future of India's welfare schemes, for citizens' privacy and for the private sector. How will this play out in 2019 and beyond? Alok Prasanna Kumar talks to hosts Surya Prakash BS and Pavan Srinath to help simplify what the judgments contained, what their implications are for 2019 and beyond. Alok is a former Supreme Court lawyer, and currently a Senior Fellow at the Vidhi Centre for Legal Policy.
ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!