Ep. 26: ಕವಡೆ ಆಟವಯ್ಯ. Board Games of India.

ThaleHarateEpisode26.jpg

ಚೌಕಾಬಾರ, ಅಲುಗುಳಿಮನೆ, ಪಗಡೆ, ಇಂತಹ ಹಲವಾರು ಆಟಗಳು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿವೆ. ಆದರೆ, ಈಚೀನ ದಿನಗಳಲ್ಲಿ ಡಿಜಿಟಲ್ ಆಟಗಳ ಮಧ್ಯೆ ಇವೆಲ್ಲ ಮರೆಯಾಗುತ್ತಿವೆ. ಹಲವು ತಲೆಮಾರುಗಳಿಂದ ಬಂದ ಈ ಆಟಗಳಿಗೆ ಪುನರ್ಜನ್ಮ ನೀಡಿರುವವರಲ್ಲಿ ಒಬ್ಬರು ಶ್ರೀರಂಜಿನಿ ಅವರು.

ಶ್ರೀರಂಜಿನಿ ಅವರು 'ಕವಡೆ' ಎಂಬ ಒಂದು ಸಂಸ್ಥೆಯನ್ನು ನಡೆಸುತ್ತಾರೆ. ಈ ಪ್ರಯತನದ ಮೂಲಕ ಇವರು ಸುಮಾರು ಹಳೆಯ ಕಾಲದ ಆಟಗಳನ್ನು ಮತ್ತೆ ಚಾಲ್ತಿಗೆ ತಂದಿದ್ದಾರೆ. ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 26ನೆ ಎಪಿಸೋಡಿನಲ್ಲಿ ಇವರ ಈ ಪಯಣದ ಹಾಗೂ ಪ್ರಯತ್ನದ ಬಗ್ಗೆ, ಗಣೇಶ್ ಚಕ್ರವರ್ತಿ ಹಾಗೂ ತಕ್ಷಶಿಲಾ ಸಂಸ್ಥೆಯ ಸೌಮ್ಯ ನಂದನ್ ಅವರ ಜೊತೆ ಮಾತನಾಡುತ್ತಾರೆ.

https://kavade.org/

There are many board games across the world. Although, several of them originated in India, they are on the brink of extinction. Sreeranjini is one of those individuals who are endeavouring to revive the interest of ancient board games in India. On Episode 26 of the Thale-Harate Kannada Podcast, Sreeranjini speaks to Ganesh Chakravarthi and Takshashila Institution's Sowmya Nandan about her endeavour and the many challenges she encountered in making this a reality.

Sreeranjini is the founder of Kavade, a store as well as an endeavour to revive traditional games. Housing a range of Indian and international games, Kavade is a one-of-a-kind store in Bengaluru that brings families and generations together, over simple pastime pleasures.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 25: ಈ ಜಿ.ಡಿ.ಪಿ. ಅಂದ್ರೆ ಏನು? What is the GDP?

ThaleHarateEpisode25.jpg

ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪಾದನೆ) ಬಹುಶಃ ದೇಶದ ಆರ್ಥಿಕ ಸ್ಥಿತಿ ಗತಿ ಯನ್ನು ವಿವರಿಸುವ ಅತ್ಯಂತ ಮೌಲ್ಯಯುತ ಅಳತೆಗೋಲು. ಭಾರತದ ಜಿ.ಡಿ.ಪಿ.ಯನ್ನು ಅಳೆಯುವ ವಿಧಾನವು ಸಂಶಯ ಮತ್ತು ವಿವಾದಗಳಲ್ಲಿ ಸಿಲುಕಿಕೊಂಡಿರುವಹಾಗಿದೆ. ಆದರೆ ನಾವು ಮೊದಲು ಜಿ.ಡಿ.ಪಿ. ಎಂದರೆ ಏನು ಮತ್ತು ಅದರ ಮಹತ್ತ್ವವನ್ನು ಅರಿಯಬೇಕು. ಅನುಪಮ್ ಮನೂರ್ ರವರು, ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರ ಜೊತೆ ತಲೆ-ಹರಟೆ ಪಾಡ್ಕಾಸ್ತಿನ 25 ನೇ ಕಂತಿನಲ್ಲಿ ಜಿ.ಡಿ.ಪಿ.ಯ ಪರಿಕಲ್ಪನೆಯನ್ನು ಸುಲಭವಾಗಿ ತಿಳಿಯುವಂತೆ ವಿವರಿಸುತ್ತಾರೆ.

ಅನುಪಮ್ ರವರು ತಕ್ಷಶಿಲಾ ಸಂಸ್ಥೆ ಯಲ್ಲಿನ ಅರ್ಥಶಾಸ್ತ್ರಜ್ಞರು. ಇಂಗ್ಲೆಂಡಿನ ಲಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆರ್ಥಿಕ ವಿಷಯಗಳ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ವಿಪುಲವಾಗಿ ಪ್ರಕಟಿಸಿದ್ದಾರೆ.

The GDP is perhaps the most important single number when it comes to any country's economy. India's GDP numbers have come under increasing suspicion and controversy, but to understand that, we need to understand what the Gross Domestic Product really is, and why it matters. Anupam Manur joins Ganesh Chakravarthi and Pavan Srinath on Episode 25 of the Thale-Harate Kannada Podcast to help unpack and understand the GDP.

Anupam Manur is an Economist at the Takshashila Institution. He did his Masters from Lancaster University in the UK, and is a prolific writer and analyst looking at economic issues.

Do read: Lies, Damned Lies and Statistics during 'Acche Din': https://www.deccanherald.com/specials/sunday-spotlight/lies-damned-lies-and-718870.html

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 20: ನಮ್ಮ ಮಕ್ಕಳು. The Children of India.

ThaleHarateEpisode20.jpg

ಮಕ್ಕಳ ಆಹಾರ, ಪೌಷ್ಟಿಕತೆ, ಮತ್ತು ವಿದ್ಯಾಭ್ಯಾಸದ ಬಗ್ಗೆ ಒಂದು ಸಮಗ್ರತಾ ದೃಷ್ಟಿಯಲ್ಲಿ ಹೇಗೆ ನೋಡಬಹುದು? ನಮ್ಮ ತಲೆ-ಹರಟೆ ಪೋಡ್ಕಾಸ್ಟಿನ 20ನೆ ಎಪಿಸೋಡಿನಲ್ಲಿ, ಲಲಿತ ಪುಲವರ್ತಿಯವರು ಪವನ್ ಶ್ರೀನಾಥ್ ಅವರ ಜೊತೆ, 47ಕೋಟಿಗೆ ಹೆಚ್ಚು ಮಕ್ಕಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ.

ಲಲಿತ ಪುಲವರ್ತಿ ಅವರು ಸೋಷಿಯೋಲೋಜಿಯಲ್ಲಿ ಪಿ.ಎಚ್.ಡಿ. ಮಾಡಿ, ಅನೇಕ ಆಡಳಿತ ಮತ್ತು ಸಾರ್ವಜನಿಕ ಕಾರ್ಯನೀತಿಯ ವಿಷಯಗಳ ಮೇಲೆ ಕೆಲಸ ಮಾಡಿದ್ದಾರೆ. ಇವರು, ಬೆಂಗಳೂರಿನಲ್ಲಿ ಪಬ್ಲಿಕ್ ಅಫ್ಫೇರ್ಸ್ ಫೌಂಡೇಶನ್ ಜೊತೆ ಕೆಲಸ ಮಾಡಿ, 2018ನೆ ಪಬ್ಲಿಕ್ ಅಫ್ಫೇರ್ಸ್ ಇಂದೆಕ್ಸಿನಲ್ಲಿ ಮಕ್ಕಳ ಪರಿಸ್ಥಿತಿಯ ಮೇಲೆ ಒಂದು ಅಧ್ಯಾಯವನ್ನು ಬರೆದಿದ್ದಾರೆ: http://www.pai.pacindia.org/#/themes/children-of-india/map

We often think about how children are being educated in India, or the state of malnutrition in our
country -- but do we ever think holistically about India's children? Lalita Pulavarti joins Pavan Srinath on Episode 20 of the Thale-Harate Kannada Podcast to talk about the challenges faced by the 470 million+ children in India.

Lalita Pulavarti is a senior researcher with a PhD in Sociology and has worked on a wide range of governance issues, conducting numerous surveys and studies. Till recently, Lalita worked with the Public Affairs Foundation in Bengaluru, and while there – she co-authored a chapter on Children of India, as a part of the 2018 Public Affairs Index. The chapter includes a Child Rights Index, an attempt to systematically collate data on the state of children in India's states.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 19: ಬಂತು ಬಂತು, ಚುನಾವಣೆ ಬಂತು! Election Season is here.

ThaleHarateEpisode19.jpg

ಚುನಾವಣೆ ಅನ್ನೋದು ನಮ್ಮ ದೇಶದಲ್ಲಿ ಒಂದು ದೊಡ್ಡ ಹಬ್ಬಕ್ಕಿಂತ ಕಮ್ಮಿ ಏನೂ ಅಲ್ಲ. ಆದರೆ ನಗರಗಳಲ್ಲಿ ಮತದಾನ ಮಾಡಲು ಏಕೆ ಅಷ್ಟು ಕಡಿಮೆ ಜನರು ಬರುತ್ತಾರೆ? ಈ ವರ್ಷ ಏನಾದರೂ ಬದಲಾವಣೆ ಕಾಣಬಹುದೆ?

ರಾಘವೇಂದ್ರ ಎಚ್. ಎಸ್. ಈ ಚುನಾವಣೆ ಸ್ಪೆಷಲ್ ಎಪಿಸೋಡಿನಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಜೊತೆ ಚುನಾವಣೆಯ ಹಿಂದೆ-ಮುಂದೆ, ಒಳಗೆ-ಹೊರಗೆ ನಡೆಯುವ ಕಾರ್ಯಗಳು, ಕೆಲಸಗಳು, ಕುತಂತ್ರಗಳ ಬಗ್ಗೆ ಚರ್ಚೆ ಮಾಡುತ್ತಾರೆ.

ರಾಘವೇಂದ್ರ ಅವರು ಒಬ್ಬ ಜರ್ನಲಿಸ್ಟ್ ಮತ್ತೆ ಬಿ.ಪ್ಯಾಕ್ ಸಂಸ್ಥೆಯಲ್ಲಿ ಬಿ.ಕ್ಲಿಪ್ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಕಾರ್ಯಕ್ರಮದಲ್ಲಿ ಆಡಳಿತದ ಬಗ್ಗೆ, ರಾಜಕೀಯದ ಬಗ್ಗೆ, ನಗರಾಭಿವೃದ್ದಿಯ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಸಕ್ತಿ ಇರುವವರು ತರಬೇತಿಯನ್ನು ಪಡೆಯುತ್ತಾರೆ. ಈ ಕಾರ್ಯಕ್ರಮಕ್ಕೆ ತಕ್ಷಶಿಲಾ ಸಂಸ್ಥೆ ಕೂಡ ತರಬೇತಿ ನೀಡುವಲ್ಲಿ ತನ್ನ ಜ್ಞಾನ ಸಂಪನ್ಮೂಲಗಳನ್ನು ಹಂಚಿಕೊಂಡಿದೆ. ಗಣೇಶ್ ಚಕ್ರವರ್ತಿ ಅವರು ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರ್ವಹಿಸಿ ಟ್ರೇನಿಂಗ ಸಹ ನೀಡುತ್ತಾ ಬಂದಿದ್ದಾರೆ.

Elections are like a grand festival to many in India, and here in Bangalore. But why do so few city residents go out to vote? Could that possibly change this year? Raghavendra HS joins Ganesh Chakravarthi and Pavan Srinath on this special episode to talk about the madness of elections in the city, and to talk about why voting without taking gifts or favours matters.

Raghavendra is a journalist and currently manages the Civic Leadership Incubation Programme (B.CLIP) at the Bangalore Political Action Committee (B.PAC), where about 60-70 aspiring civic leaders and local politicians are trained every year in the fundamentals of urban development and governance. The Takshashila Institution is a knowledge partner for this programme, providing the classroom training. Our host Ganesh has been managing this programme for the last three batches.

Some links for our listeners:

  1. National Voters' Service Portal: https://www.nvsp.in/

  2. Chunavana App: https://play.google.com/store/apps/details?id=com.ksrsac.pollingstation&hl=en_IN

  3. C-VIGIL App: https://play.google.com/store/apps/details?id=in.nic.eci.cvigil

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 18: ನಿಮ್ಮ ಮತದಾನದ ಅಳುವಳಿಗಳು. Voting and Opinion Polls.

ThaleHarateEpisode18.jpg

ಮತದಾನದ ಮಹತ್ವ ಏನು? ನಿಮ್ಮ ಒಂದು ಮತಕ್ಕೂ ಮೌಲ್ಯವಿದೆಯೇ? ಅಥವಾ ಕೆಲವು ಜನರ ಮತವು ಮತ್ತೆಲ್ಲರ ಮತಕ್ಕಿಂತ ಹೆಚ್ಚು ಮೌಲ್ಯಯುತವಾದದ್ದೆ? ಕಾರ್ತಿಕ್ ಶಶಿಧರ್ರವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 18ನೆ ಎಪಿಸೋಡಿನಲ್ಲಿ ಚುನಾವಣೆ ಮತ್ತು ಅಭಿಪ್ರಾಯ ಸಮೀಕ್ಷೆಗಳ ಮೂಲಕ ಚುನಾವಣೆಗಳ ಫಲಿತಾಂಶವನ್ನು ಊಹಿಸುವುದರ ಬಗ್ಗೆ ಚರ್ಚೆ ಮಾಡುತ್ತಾರೆ.

ಕಾರ್ತಿಕ್ ಶಶಿಧರ್ ಅವರು ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮತ್ತೆ ಡೇಟಾ ಸೈಂಟಿಸ್ಟು. ಇವರು ಭಾರತದ ಚುನಾವಣೆಗಳ ಮೇಲೆ ಹಾಗೂ ಅಭಿಪ್ರಾಯ ಸಮೀಕ್ಷೆಗಳ ಮೇಲೆ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ ಮತ್ತು ಅಂಕಣಗಳನ್ನು ಬರೆದಿದ್ದಾರೆ. ಇವರು ಮಿಂಟ್ ನ್ಯೂಸ್ಪಪೆರ್ ಅಲ್ಲಿ ಎಲೆಕ್ಷನ್ ಮೆಟ್ರಿಕ್ಸ್ ಎಂಬ ಒಂದು ಅಂಕಣವನ್ನು ಸಹ ಬರೆದಿದ್ದಾರೆ.

Does it make sense to take the effort to go out and vote? Does your vote matter? Or is it possible that some votes end up mattering more than others? Karthik Shashidhar joins Pavan Srinath and Ganesh Chakravarthi on Episode 18 of the Thale-Harate Kannada Podcast to talk about voting and predicting election results via opinion polls.

Karthik Shashidhar is a management consultant and data scientist who has worked and written extensively on Indian elections and Indian opinion polls. Karthik also wrote a regular column in Mint called Election Metrics, analysing Indian elections and polls since 2013 using data.

Suggested reading: Rajeeva L. Karandikar's slides on the science and conduct of Opinion polls, Exit polls and Early seat projections: http://www.iitk.ac.in/reach/2008/Forecasting/Rajeev.pdf

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep 17. ಪ್ರಜಾತಂತ್ರ, ದೇಣಿಗೆ ಮತ್ತು ಹೂಡಿಕೆ. Philanthropy, Impact Investing & More.

ThaleHarateEpisode17.jpg

ಎಂ.ಪಿ. ಮತ್ತು ಎಂ.ಎಲ್.ಎ.ಗಳು ಶಾಸಕಾಂಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲು ಏನು ಮಾಡಬೇಕು? ದೇಣಿಗೆ ನೀಡುವ ಸಂಸ್ಥೆಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ತರಲು ಹೊರಟಿರುವ ಹೂಡಿಕೆ ಸಂಸ್ಥೆಗಳು ಹೇಗೆ ಬದಲಾವಣೆಯನ್ನು ತರಬಹುದು? ಬನ್ನಿ ಕೇಳಿ!

ಸಿ. ವಿ. ಮಧುಕರ್ ರವರು ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಿ.ಆರ್.ಎಸ್. ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆಯ ಸಂಸ್ಥಾಪಕ-ನಿರ್ದೇಶಕರಾಗಿದ್ದರು. ಅದಕ್ಕೂ ಮುಂಚೆ ಅವರು ವಿಶ್ವ ಬ್ಯಾಂಕ್ ನ ವಾಷಿಂಗ್ಟನ್ ಕಚೇರಿಯಲ್ಲಿ ಕೆಲಸಮಾಡುತ್ತಿದ್ದರು. ಅವರ ಬಗ್ಗೆ ಮತ್ತಷ್ಟು ವಿವರಗಳಿಗೆ ಇಲ್ಲಿ ನೋಡಿ. ಅವರು ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ಇನ ಈ ಕಂತಿನಲ್ಲಿ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ ಜೊತೆ ಮಾತನಾಡುತ್ತಾರೆ.

ಮಧುಕರ್ ರವರು ಪಿ.ಆರ್.ಎಸ್. ಲೆಜಿಸ್ಲೇಟಿವ್ ರೀಸರ್ಚ್ ಸ್ಥಾಪಿಸಿದ ಆರಂಭದ ದಿನಗಳ ಅನುಭವಗಳನ್ನು ಹಂಚಿಕೊಳ್ಳುತ್ತ ಎಂ.ಪಿ. / ಎಂ.ಎಲ್.ಎ.ಗಳ ಜೊತೆ ನಾಗರೀಕ ಸಂಸ್ಥೆಗಳು ಏಕೆ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ವಿವರಿಸುತ್ತಾರೆ. ನಮ್ಮ ದೇಶದಲ್ಲಿನ ದೇಣಿಗೆ ಸಂಸ್ಥೆಗಳ ಬೆಳವಣಿಗೆ ಬಗ್ಗೆ ಮಾತನಾಡುತ್ತ ದೊಡ್ಡ ಉದ್ಯಮಿಗಳು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವ ಬಗ್ಗೆ ಮತ್ತು ವಿದೇಶಿ ದೇಣಿಗೆ ಬಗೆಗಿನ ಅವರ ಅಭಿಪ್ರಾಯವನ್ನು ತಿಳಿಸುತ್ತಾರೆ. ಹಾಗೆಯೇ ಡಿಜಿಟಲ್ ಐಡೆಂಟಿಟಿಯ ಅಗತ್ಯ ಮತ್ತು ಡಿಜಿಟಲ್ ನಾಗರಿಕರಾಗಿ ನಾವು ಯಾವ ಮುನ್ನೆಚ್ಚರಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ.

How do we get our MPs and MLA's to participate effectively on the floor of the Parliament or Assembly? How can philanthropy and impact investing make a difference in society?

CV Madhukar of Omidyar Network joins Pavan Srinath and Surya Prakash BS for a wide ranging discussion in Episode 17 of Thale-Harate Kannada Podcast. Madhukar was Founder Director of PRS Legislative Research. Prior to that he was with the World Bank in Washington DC. You can read his full profile here.

Madhukar talks about the early days of the formation of PRS Legislative Research and why civil society organisations need to engage more closely with MPs and MLAs. He shares his thoughts on the evolution of philanthropy in India, on big businesses impacting policy, and foreign donors. He explains how impact investing can make a difference to the society. Madhukar talks about the need for Digital Identity and how we as digital citizens need to be on our guard.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 16: ನ್ಯಾಯಾಂಗ : ಒಂದು ಪಕ್ಷಿ ನೋಟ. The Indian Judiciary.

ThaleHarateEpisode16.jpg

'ರೂಲ್ ಆಫ್ ಲಾ' ಎಂದರೆ ಏನು? ಜನಸಾಮಾನ್ಯರಿಗೆ ಅದು ಹೇಗೆ ಪ್ರಸ್ತುತ? ನಮ್ಮ ಕೋರ್ಟುಗಳು ಸಮಾಧಾನಕರವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ನಮ್ಮ ದೇಶದ ನ್ಯಾಯಾಂಗವ್ಯವಸ್ಥೆ ಮತ್ತು ಅದರ ಸುಧಾರಣೆಗಳ ಬಗೆಗಿನ ಮೊದಲನೇ ಕಂತನ್ನು ಬನ್ನಿ ಕೇಳಿ.

'ರೂಲ್ ಆಫ್ ಲಾ' ನಮ್ಮ ನಿಮ್ಮೆಲ್ಲರ ದೈನಂದಿನ ಜೀವನವನ್ನು ಹಲವು ವಿಧದಲ್ಲಿ ಪ್ರಭಾವಿಸುತ್ತದೆ. ಇದು ಬರಿ ವಕೀಲರು ಮತ್ತು ನ್ಯಾಯಾಧೀಶರುಗಳ ಮಾತ್ರ ಮೀಸಲಾದ ವಿಷಯವಲ್ಲ. 'ರೂಲ್ ಆಫ್ ಲಾ' ವನ್ನು ಎತ್ತಿ ಹಿಡಿಯುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗದ ಪಾತ್ರ ಮಹತ್ತರವಾದದ್ದು. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮೊರೆ ಹೋದವರು ಪಡುವ ಪಾಡು ಎಲ್ಲರಿಗೂ ಗೊತ್ತಿದೆ.

ಈ ಕಂತಿನಲ್ಲಿ ಸೂರ್ಯ ಪ್ರಕಾಶ ಅವರು ಪವನ್ ಶ್ರೀನಾಥ್ ಜೊತೆ ಮಾತನಾಡುತ್ತ ನ್ಯಾಯಾಂಗವ್ಯವಸ್ಥೆ ಮತ್ತು ಅದರ ರಚನೆಯ ರೂಪು-ರೇಷೆಗಳ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ. ಸೂರ್ಯ ಪ್ರಕಾಶ್ ರವರು ದಕ್ಷ್ ಸಂಸ್ಥೆಯಲ್ಲಿ ಕಳೆದ 4 ವರ್ಷಗಳಿಂದ ಇದ್ದಾರೆ. ದಕ್ಷ್ ನ್ಯಾಯಾಂಗ ಸುಧಾರಣೆಯ ವಿಷಯವಾಗಿ ಡೇಟಾ ಆಧಾರಿತವಾಗಿ ಸಂಶೋಧನೆ ನಡೆಸುತ್ತಿದೆ.

Why is Rule of Law important to you and me? How are courts and tribunals functioning? Here's an overview of the Indian judiciary in the first part of a series on judiciary and judicial reforms.

Rule of Law affects each one of us every day. It is not the exclusive domain of lawyers and judges. Well functioning judiciary is important to maintaining Rule of Law. Problems of pendency and long time taken for rendering justice by the Indian judiciary is well known. In this introductory episode, Surya Prakash gives an overview of the judiciary and its structure. He also shares findings from the research by DAKSH that highlight the problems citizens face in obtaining justice.

Surya Prakash BS has a wide-ranging conversation with Pavan Srinath on Episode 16 of the Thale-Harate Kannada Podcast on the Indian Judiciary. Surya Prakash BS has been with DAKSH since 2015. DAKSH is a Bangalore based civil society organisation working in the area of judicial reforms using legal-empirical methods and data analysis.

If you wish to read more about the functioning of the Indian Judiciary, here are a few places to start:

You can read DAKSH's State of the Indian Judiciary Reports, here and here.

Here is a YouTube playlist of short videos documentaries by DAKSH, JANA (Justice and the Nation's Approaches) on how non-judicial bodies have proliferated in delivering justice. An introductory video for the series can be found here.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 10: ಕರ್ನಾಟಕದ 2019 ಬಜೆಟ್. Karnataka's Budget Matters More.

ThaleHarateEpisode10.jpg

ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿಗಳ ಖರ್ಚಿನ ಅಂದಾಜು ಮಾಡಲಾಗಿದೆ - ಅಂದರೆ ತಲಾ ರೂ. 34,000. ಇದು ಕೇಂದ್ರ ಸರ್ಕಾರವು ಪ್ರತಿ ನಾಗರೀಕನ ಮೇಲೆ ಮಾಡುವ ಖರ್ಚಿಗಿಂತ 50% ಹೆಚ್ಚು. ಮತ್ತು ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯು ನಮ್ಮ ದೈನಂದಿನ ಜೀವನಕ್ಕೆ ಹತ್ತಿರವಾದ ನಂಟಿದೆ : ರಸ್ತೆಗಳು, ನೀರು ಸರಬರಾಜು, ಸಾರಿಗೆ, ಆರೋಗ್ಯ ಮತ್ತು ಕೃಷಿ.
ಗಣೇಶ್ ಚಕ್ರವರ್ತಿಯವರು ಪವನ್ ಶ್ರೀನಾಥ್ ಜೊತೆ ಕರ್ನಾಟಕ ಸರ್ಕಾರದ ಬಜೆಟ್ ಎಲ್ಲರಿಗೂ ಸುಲಭವಾಗಿ ತಿಳಿಸುತ್ತ ಅದರ ಸೂಕ್ಷ್ಮತೆಗಳ್ಳನ್ನು ಚರ್ಚಿಸುತ್ತಾರೆ. ರಾಜ್ಯಕ್ಕೆ ಆದಾಯ ಯಾವ ಮೂಲಗಳಿಂದ ಬರುತ್ತವೆ, ಬೆಂಗಳೂರಿಗೆ ದೊರೆತಿರುವ ಪ್ರಾಮುಖ್ಯತೆ, ಆರೋಗ್ಯ ಕ್ಷೇತ್ರದ ಮುಂದಿರುವ ಸವಾಲುಗಳು, etc. ಪವನ್ ಹಲವು ವರ್ಷಗಳಿಂದ ಬಜೆಟ್ ಗಳ ಬಗ್ಗೆ ತಕ್ಷಶಿಲಾ ಸಂಸ್ಥೆಯಲ್ಲಿ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸುತ್ತ ಬಂದಿದ್ದಾರೆ. ಅವರು ದ ಪ್ರಗತಿ ಪೋಡ್ಕಾಸ್ಟ್ ಅನ್ನು ನಡೆಸಿಕೊಡುತ್ತಾರೆ.

Chief Minister HD Kumaraswamy presented the first full budget of his coalition government in Karnataka, on February 8th. The state plans to spend over 2.34 lakh crore rupees this year -- over 34,000 rupees per resident! 50% larger than the Union budget per person, and the state government's mandate covers all things that matter to our daily lives, from water and health to roads and transport to agriculture.

Ganesh Chakravarthi talks to Pavan Srinath to unpack the Karnataka budget. They discuss where Karnataka gets its revenues from, how much importance is given to Bengaluru, health challenges and more. Pavan has been working on budgets for the past several years at the Takshashila Institution, and also hosts The Pragati Podcast.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloud or any other podcast app. We are there everywhere. ಬನ್ನಿ ಕೇಳಿ!

 

Ep. 09: ಭಾರತ ಸರ್ಕಾರದ 2019 ಬಜೆಟ್. India's Budget Explained.

ThaleHarateEpisode09.jpg

ಭಾರತ ಸರ್ಕಾರವು ಮಂಡಿಸಿದ 2019-20 ಸಾಲಿನ ಇಂಟರಿಮ್ ಬಜೆಟ್ಟಿನ ಮೊತ್ತ 27.8 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರತಿಯೊಬ್ಬ ಭಾರತೀಯರಿಗೂ ಸುಮಾರು ರೂ. ಇಪ್ಪತ್ತು ಸಾವಿರದಷ್ಟು ಖರ್ಚು. ಈ ಅಂಕಗಳನ್ನು ಅರ್ಥ ಮಾಡಿ ಕೊಳ್ಳುಲು ಈ ಎಪಿಸೋಡ್ ನಲ್ಲಿ ಯತ್ನಿಸಿದ್ದೇವೆ.

ಗಣೇಶ್ ಚಕ್ರವರ್ತಿಯವರು ಈ ವಿಷಯ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಚರ್ಚಿಸುತ್ತಾರೆ. ಸೂರ್ಯ ಪ್ರಕಾಶ್ ಹಿಂದೆ ಕಂಪನಿಗಳ ಆದಾಯ ತೆರಿಗೆ ನೋಡಿಕೊಳ್ಳುತ್ತಿದ್ದು ಈಗ ದಕ್ಷ್ ಸಂಸ್ಥೆಯಲ್ಲಿ ನ್ಯಾಯಾಂಗ ಸುಧಾರಣೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಪವನ್ ರವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕರು. ಇವರು ರಾಜ್ಯದ ಬಜೆಟ್ಗಳು, ಡಿಫೆನ್ಸ್ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಸಂಶೋಧನೆ ಮಾಡುತ್ತಾರೆ.

ಈ ಎಪಿಜೆಸೋಡ್ನಲ್ಲಿ ಭಾರತದ ಬಜೆಟ್, ಆದಾಯ ಮೇಲಿನ ತೆರಿಗೆ ಮತ್ತು ಜೀ.ಎಸ್.ಟೀ., ಸರ್ಕಾರದ ಯೋಜನೆಗಳು, ರೈತರ ಪರಿಸ್ಥಿತಿ, ಜನರರೋಗ್ಯ, ಡಿಫೆನ್ಸ್ ಮತ್ತು ಸಾಮಾಜಿಕ ಭದ್ರತೆಯ ವಿಷಯಗಳು ಮೇಲೆ ಹರಟೆ ಹೊಡೆದಿದ್ದೇವೆ.

ತಪ್ಪದೆ ಕೇಳಿ ನಮ್ಮ ಮುಂದಿನ ಎಪಿಸೋಡ್, ಎಲ್ಲಿ ನಾವು ಕರ್ನಾಟಕ ರಾಜ್ಯದ ಬಜೆಟ್ ಕುರಿತು ಚರ್ಚೆ ಮಾಡುತ್ತೇವೆ.

The Government of India presented its Interim Budget for 2019-20 of Rs 27.8 Trillion on February 1st. This amounts to an expenditure of over 20,000 rupees per Indian. What do these numbers mean, and how should we citizens and taxpayers look at how the Government is planning to spend our money?

Ganesh Chakravarthi talks to Pavan Srinath and Surya Prakash BS to understand the Union Budget. Surya is a Chartered Accountant by training, has managed taxes for large corporations in the past, and currently works on judicial reforms at Daksh. Pavan has been working as a researcher and analyst at the Takshashila Institution examining state budgets, health and defence budgets for several years.

This episode includes discussions on the quirks of India's government budgeting system, on how taxes are levied, new schemes announced by the government, and expenditure on a range of subjects from farmers to health to defence to pensions and social security.

Don't miss next week's episode on Karnataka's state government budget.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTube or any other podcast app. We are there everywhere. ಬನ್ನಿ ಕೇಳಿ!

You can listen to this show and other awesome shows on the new and improved IVM Podcast App on Android: https://ivm.today/android
or iOS: https://ivm.today/ios